• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಬಾರಯ್ಯ ವೆಂಕಟರಮಣ

ಪಲ್ಲವಿ:
ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆ
ಅನುಪಲ್ಲವಿ
ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋ
ಚರಣಗಳು:

೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋ
ಮೋದಸೂಕರ ಬಾರೋ ಸದಯಾ ನರಸಿಂಹ ಬಾರೋ

೨: ವಾಮನ ಭಾರ್ಗವನೆ ಬಾರೋ ರಾಮಕೃಷ್ಣನೆ ನೀ ಬಾರೋ
ಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿ ನೀ ಬಾರೋ

೩: ಅರವಿಂದ ನಾಭ ಬಾರೋ ಸುರರ ಪ್ರಭುವೇ ಬಾರೋ
ಪುರುಹೂತ ವಂದ್ಯ ಬಾರೋ ಪುರಂದರ ವಿಠ್ಠಲ ಬಾರೋ

Advertisements

ಅಪ್ಪಪ್ಪಾ ನೀ ನೋಡಪ್ಪ

೧.

ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ
ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ
೨:
ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ
ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ೩:
ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ಕಾನನಗಡ್ಡೆ ಬೇಡಪ್ಪ ಒಪ್ಪರ ಬೇರ ತಿನ್ನಪ್ಪ೪:
ತಿನ್ನಪ್ಪ ತಿನ್ನಪ್ಪ ಭಕ್ತಿ ರಸದ ಹಣ್ಣಪ್ಪ
ಸಣ್ಣವ ನೀಡುವನಪ್ಪ ತೆರೆದ ಬಾಯ ತೋರಪ್ಪ

೫:
ತೋರಪ್ಪ ನೀ ತೋರಪ್ಪ ಮುದ್ದು ರೂಪವ ತೋರಪ್ಪ
ಇಂದ್ರ ಪದವ ನೀಡಪ್ಪ ಬಲಿಗೆ ಕಾವಲಾಗಪ್ಪ

೬:
ಆಗಪ್ಪ ಭೃಗು ರಾಮಪ್ಪ ವನಚರನು ಆಗಪ್ಪ
ಭಾಗವತ ಭಟನಪ್ಪ ಪಾದುಕೆ ಅವಗೆ ನೀಡಪ್ಪ

೭:
ನೀಡಪ್ಪ ನೀಡಪ್ಪ ಹೆಣ್ಣ ಅವಗೆ ನೀಡಪ್ಪ
ಬಡವನಾದರೇನಪ್ಪ ಸೋದರ ಅಳಿಯನು ಬಿಡನಪ್ಪ

೮:
ಬಿಡೆನಪ್ಪ ಬಿಡೆನಪ್ಪ ನಿನ್ನ ಚರಣವ ಬಿಡೇನಪ್ಪ
ಕಡಿವಾಣವ ಪಿಡಿಯಪ್ಪ ಪಾರ್ಥಗೆ ಸಾರಥ್ಯ ಮಾಡಪ್ಪ

೯:
ಮಾಡಪ್ಪ ನೀ ಮಾಡಪ್ಪ ಮೋಹ ಶಾಸ್ತ್ರವ ಕಲಿಸಪ್ಪ
ದಿಟ್ಟ ತೇಜಿಯನೇರಪ್ಪ ತಂದೆ ಪುರಂದರ ವಿಠಲಪ್ಪ