• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ರಂಗನ ನೋಡಿರೆ

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ || ಪಲ್ಲವಿ||
ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ ||1||
ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ ||2||
ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ ||3||

ರಂಗ ಬಾರೋ

ಪಲ್ಲವಿ:
ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||
ಅನುಪಲ್ಲವಿ:
ರಂಗ ಬಾರೋ ನರಸಿಂಗ ಬಾರೋ ||
ಚರಣಗಳು:
1: ಕಂದ ಬಾರೋ ಎನ್ನ ತಂದೆ ಬಾರೋ ಇಂದಿರಾ ರಮಣ ಮುಕುಂದ ಬಾರೋ
2: ಅಪ್ಪ ಬಾರೋ ತಿಮ್ಮಪ್ಪ ಬಾರೋ ಕಂದರ್ಪನಯ್ಯನೆ ಕಂಚಿ ವರದ ಬಾರೋ
3: ಅಣ್ಣ ಬಾರೋ ಎನ್ನ ಚಿನ್ನ ಬಾರೋ ಪುಣ್ಯಮೂರ್ತಿ ಮಹಿಷಪುರ ಚೆನ್ನ ಬಾರೋ
4: ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎನ್ನಿಷ್ಟ ಮೂರ್ತಿ ಪುರಂದರ ವಿಟ್ಠಲ ಬಾರೋ [...]