• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ನೀನೇ ದೊಡ್ಡವನೋ

ಪಲ್ಲವಿ:
ನೀನೇ ದೊಡ್ಡವನೋ ನಿನ್ನ ದಾಸರು ದೊಡ್ಡವರೋ ಹರಿಯೇ ?*
ಅನುಪಲ್ಲವಿ:
ನಾನಾ ತೆರದಿ ನಿದಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ
ಚರಣ:
ತರಳನು ಕರೆಯಲು ಭರದಿ ಕಂಬದಿ ಬಂದು ನರಮೃಗರೂಪದಿಂದ ಅವನ ಕಾಯ್ದೆ
ವರಗಳೀವ ಪುರಂದರ ವಿಠಲನೆ ಸ್ಮರಿಪರ ಮನದಲ್ಲಿ ಸೆರೆಸಿಕ್ಕಿದ ಮೇಲೆ
* ನೀನೇ ಬಲ್ಲಿದನೋ ನಿನ್ನ ದಾಸರು ಬಲ್ಲಿದರೋ ಎಂಬ ಪಾಠವೂ ಇದೆ

ನಿಮ್ಮ ಭಾಗ್ಯ ದೊಡ್ಡದೋ

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ಸಮ್ಮತಿಯಲಿ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ ||ಪಲ್ಲವಿ||
ಸರಕು ಬೆಲ್ಲ ತುಪ್ಪ ಧಾನ್ಯ, ಸವೆಯಿತೆಂಬ ಚಿಂತೆಯುಂಟು
ಹರಿಯ ನಾಮಾಮೃತಕೆ ಇನ್ನು ಯಾವ ಚಿಂತೆ ಇಲ್ಲವಯ್ಯ ||ಚರಣ1||
ಹೇಮ ಹೊನ್ನು ಹಣಗಳಿಗೆ ಹೇರಳದ ಭಯಗಳುಂಟು
ರಾಮನಾಮ-ದ್ರವ್ಯಕಿನ್ನು ಯಾವ ಭಯವು ಇಲ್ಲವಯ್ಯ ||ಚರಣ2||
ನಮ್ಮ ಭಾಗ್ಯ ಲಕ್ಷ್ಮೀ-ದೇವಿ ನಿಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ನಮ್ಮ ಪುರಂದರವಿಠ್ಠಲ ||ಚರಣ3||

ನಾರಾಯಣ ನಿನ್ನ ನಾಮದ ಸ್ಮರಣೆಯ

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ |
ಎಷ್ಟಾದರೂ ಮತಿಗೆಟ್ಟು ಇರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರ ಒಂದಿರಲಿ ||1||
ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಗದ ಒಳಗಿರಿಸಿ (ಒಳಗೆ ಇಟ್ಟು)
ಎಂತೋ ಪುರಂದರ ವಿಟ್ಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ||2||

ಪಾಠಾಂತರ:
ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ
ಇಷ್ಟಾರ್ಥಗಳು ಎಲ್ಲ ಕೂಡಿರಲಿ
ಕೃಷ್ಣ ಕೃಷ್ಣ ಎಂಬ ಅಭೀಷ್ಟದ ನಾಮವ
ಅಷ್ಟಾಕ್ಷರೀ ಮಂತ್ರ ಜಪಿಸಿದ ಹಾಗೆ ||1||
ಸಂತತ ಹರಿ ನಿನ್ನ ಸಾಸಿರ ನಾಮವು
ಎನ್ನ ಅಂತರಂಗದಲಿ ಇರುತಿರಲಿ
ಸಂತತ ವರದ ಶ್ರೀ ಪುರಂದರ ವಿಠಲನ
ಅಂತ್ಯಕಾಲದಲ್ಲಿ [...]

ನೀನ್ಯಾಕೋ ನಿನ್ನ ಹಂಗ್ಯಾಕೋ

ನೀನ್ಯಾಕೋ ನಿನ್ನ ಹಂಗ್ಯಾಕೋ
ಪಲ್ಲವಿ:
ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ
ಚರಣ
1:  ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋ
2:  ಪ್ರಹ್ಲಾದನ ಪಿತ ಬಾಧಿಸುತಿರುವಾಗ ನರಹರಿಯೆಂಬ ನಾಮವೆ ಕಾಯ್ತೋ
3:  ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ
4:  ಯಮನ ದೂತರು ಬಂದು ಅಜಾಮಿಳನೆಳೆವಾಗ ನಾರಾಯಣನೆಂಬ ನಾಮವೆ ಕಾಯ್ತೋ
5:  ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ನಾಮ ಎಂಬ ನಾಮವೆ ಕಾಯ್ತೋ
6:  ಹಸುಳೆ ಆ [...]

ನರನಾದ ಮೇಲೆ

ಪಲ್ಲವಿ:
ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ||
ಚರಣಗಳು:

ಭೂತ ದಯಾಪರನಾಗಿರ ಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು ಮಾತಿಗೆ ಹರಿಯೆನ್ನ ಬೇಕು ||1||
ಆರು ವರ್ಗವನಾಳಿಯಲು ಬೇಕು |
ಮೂರು ಗುಣಂಗಳ ಮೀರಲು ಬೇಕು |
ಸೇರಿ ಬ್ರಹ್ಮನೊಳು ಸುಖಿಸಲು ಬೇಕು ||2||
ಅಷ್ಟ ಮದಂಗಳ ತುಳಿಯಲು ಬೇಕು |
ದುಷ್ಟರ ಸಂಗವ ಬಿಡಲು ಬೇಕು |
ಕೃಷ್ಣ ಕೇಶವ ಎನ್ನಬೇಕು ||3||
ವೇದ ಶಾಸ್ತ್ರವನೋದಲು ಬೇಕು |
ಭೇದಹಂಕಾರವ ನೀಗಲು ಬೇಕು |
ಮಾಧವ ಸ್ಮರಣೆಯೊಳಿರಬೇಕು ||4||
ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು |
ಭ್ರಾಂತಿ ಕ್ರೋಧವ ಕಳೆಯಲು ಬೇಕು |
ಸಂತರ [...]