ಪಲ್ಲವಿ
ಗಜವದನ ಬೇಡುವೇ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೇ
ಅನುಪಲ್ಲವಿ
ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ ||ಗಜವದನ ಬೇಡುವೆ||
ಚರಣ
ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ ||ಗಜವದನ ಬೇಡುವೆ||
ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋ ||ಗಜವದನ ಬೇಡುವೆ||
Filed under: ಗ, ಗಣಪತಿ, ದೇವತಾ ಸ್ತುತಿ | Tagged: ಗಜವದನ, ಪುರಂದರ | No Comments »