Posted on July 14, 2008 by neelanjana
ಪಲ್ಲವಿ:
ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಚರಣ
1:
ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು
2:
ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು
3:
ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ
Filed under: ಅಂ | Tagged: ಅಂ, ರಾಗ, ಸಂಗೀತ, music, raaga, raga | No Comments »
Posted on July 14, 2008 by neelanjana
ಪಲ್ಲವಿ:
ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆ
ಚರಣ:
1:
ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ
2:
ಹೊಳೆವ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ
3:
ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ
4:
ಸತ್ಯವೆಂಬುವ ಹುಟ್ಟು ಅಂಬಿಗ ಸದಾ ಭಕ್ತಿಯೆಂಬುದೆ ಪಥ ಅಂಬಿಗ
ನಿತ್ಯ ಮೂರುತಿ ಪುರಂದರ ವಿಟ್ಠಲ ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ
Filed under: ಅಂ | Tagged: ಅಂ | No Comments »
Posted on June 10, 2008 by neelanjana
ತಂಗಾಳಿ ವಶವಲ್ಲವೇ ||ಪ||
ಅಂಗದೊಳಗೆ ಬೆಳದಿಂಗಳು ತುಂಬಿತು ||ಅ.ಪ||
ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು
ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ ||ಚ1||
ಬಂಗಾರವೊಡಲಿಗೆ ಭಾರವಾಗಿದೆಯೇ ಶೃಂಗರಿಸಕೊಳ ಸೇರಲಿಲ್ಲ
ಅಂಗಜ ಶರತಾಪ ತಾಳಲಾರೆ ನಾನು ಉಂಗುರವು ನಿನಗೆ ಉಚಿತವೇನೇ ಹೆಣ್ಣೇ||ಚ 2||
ಮುನ್ನ ಪುರಂದರ ವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ
ಅನ್ನ ಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೇ ||ಚ 3||
* ಇದೊಂದು ನಾಯಕೀ ಭಾವದ ರಚನೆ. ದಾಸರು ಪುರಂದರ ವಿಠಲನನ್ನು ಕಾಯುತ್ತಿರುವ ಹೆಣ್ಣೊಬ್ಬಳು, ತನ್ನ [...]
Filed under: ಅಂ, ತ | Tagged: ನಾಯಕೀ ಭಾವ, ವಿರಹ, ಶೃಂಗಾರ, SrngAra | No Comments »
Posted on February 25, 2008 by neelanjana
ಪಲ್ಲವಿ
ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ
ಚರಣ:
1:
ಚಕ್ಕುಲಿ ಕೊಡು ಎನಗೆ ಗೋಪಿ
ಅಕ್ಕರದಿ ಬಂದೆನೆ ಗೊಲ್ಲರ
ಮಕ್ಕಳ ಎಲ್ಲರೊಡ ಗೂಡಿ ಹಲವು
ಗೋವ್ಗಳ ಕಾಯ್ದು ಬಂದೆನೆ
2:
ಅಮ್ಮಣ್ಣಿ ಕೊಡು ಎನಗೆ ಗೋಪಿ
ಬೆಣ್ಣೆಯ ತೋರೆ ಮೇಲೆ
ಗಮ್ಮನೆ ತಟಕನೆ ಮೊಸರನೆ ಸವಿದು
ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು
3:
ಅಪ್ಪಚ್ಚಿ ಕೊಡು ಎನಗೆ ಗೋಪಿ
ತುಪ್ಪವ ಕೊಡೆ ಮೇಲೆ
ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ
ಉಪ್ಪು ಕಡಲೆಯನ್ನು ಚೀಲದಿ ತುಂಬುವೆ
4:
ಚೆಂಡು ಕೊಡು ಎನಗೆ ಗೋಪಿ
ಚಿನಿಕೋಲು ಬೇಕಲ್ಲ
ಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ
ಹಿಂಡು ಗೋವುಗಳ ಕಾಯ್ದು ಬಂದೆನೆ
5:
ಈ ಲೀಲೆಗಳ ಕೇಳಿ ಗೋಪಿ
ತೋಳಿನೊಳ್ ಬಿಗಿದಪ್ಪಿ
ಶ್ರೀಲೋಲ ಪುರಂದರ [...]
Filed under: ಅಂ | Tagged: ಅ, ಅಂ, ಕೃಷ್ಣನ ಬಾಲ ಲೀಲೆ, ಕೃಷ್ಣಲೀಲೆ, ವಾತ್ಸಲ್ಯ ಭಾವ | No Comments »
Posted on February 10, 2008 by neelanjana
ಪಲ್ಲವಿ:
ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ :
ಅಂಬುಜನಾಭ ದಯದಿಂದ ಎನ್ನ ಮನೆಗೆ
ಚರಣಗಳು:
ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1||
ಕಣ್ಣ ಬಿಡುವನು ತನ್ನ ಬೆನ್ನ ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನಣ್ಣ ಬೆಣ್ಣೆಯ ಕಳ್ಳ ಮನೆಯ ಬಿಟ್ಟು ಕುದುರೆಯನೇರಿದ || 2||
ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ
ಶೂರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರ ವಿಟ್ಠಲ ಮನೆಗೆ [...]
Filed under: ಅಂ, ದಶಾವತಾರ | Tagged: ದಶಾವತಾರ | No Comments »