ಈಗಲುಪ್ಪವಡಿಸಿದಳು ಇಂದಿರಾದೇವಿ ಯೋಗರತಿ ನಿದ್ರೆ ತಿಳಿದು ||ಪಲ್ಲವಿ||
ಚರಣಗಳು:
ಕಡೆಕಣ್ಣ ಅಂಗೈಯಿಂದಲೊರಸುತ ಸಡಿಲಿದ ತುರುಬ ಬಿಗಿದು ಕಟ್ಟುತ
ನಡುವಿನೊಡ್ಯಾಣವ ನಟನೆಯಿಂ ತಿರುವುತ ಕಡಗ ಕಂಕಣ ಬಳೆ ಕರದಿ ಘಲ್ಲೆನುತ ||1||
ಕೂರುಗುರು ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕನು ಬಿಚ್ಚಿಹಾಕುತ
ಜಾರಿದ ಜಾಜಿದಂಡೆ ಸರವನೀಡಾಡುತ ಮೋರೆಯ ಕಿರುಬೆವರ ಮುಂಜೆರಗಿಲೊರಸುತ ||2||
ಕಕ್ಕಸ ಕುಚದೊಳಿರ್ದ ಕಸ್ತೂರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ
ಅಕ್ಕರದ ತಾಂಬೂಲ ಸರಸದಿಂದುಗುಳುತ ಚೊಕ್ಕ ಪುರಂದರ ವಿಠಲನ ನೋಡಿ ನಗುತ ||3||
* ಈ ರಚನೆಯ ಬಗ್ಗೆ ಹೆಚ್ಚಿನ ವಿವರಗಳುಳ್ಳ ಒಂದು ಬರಹಕ್ಕೆ ಇಲ್ಲಿ ಚಿಟಕಿಸಿ: ಶೃಂಗಾರ ರಸಮಂಜರಿ
: ಕಡತದೊಂದಿಗೆ ಸಂಪಾದಿಸಲಾಗಿದೆ ಈ, ಶೃಂಗಾರ | Tagged: ಲಕ್ಷ್ಮಿ, ಶೃಂಗಾರ, SrngAra