Posted on June 10, 2008 by neelanjana
ಈಗಲುಪ್ಪವಡಿಸಿದಳು ಇಂದಿರಾದೇವಿ ಯೋಗರತಿ ನಿದ್ರೆ ತಿಳಿದು ||ಪಲ್ಲವಿ||
ಚರಣಗಳು:
ಕಡೆಕಣ್ಣ ಅಂಗೈಯಿಂದಲೊರಸುತ ಸಡಿಲಿದ ತುರುಬ ಬಿಗಿದು ಕಟ್ಟುತ
ನಡುವಿನೊಡ್ಯಾಣವ ನಟನೆಯಿಂ ತಿರುವುತ ಕಡಗ ಕಂಕಣ ಬಳೆ ಕರದಿ ಘಲ್ಲೆನುತ ||1||
ಕೂರುಗುರು ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕನು ಬಿಚ್ಚಿಹಾಕುತ
ಜಾರಿದ ಜಾಜಿದಂಡೆ ಸರವನೀಡಾಡುತ ಮೋರೆಯ ಕಿರುಬೆವರ ಮುಂಜೆರಗಿಲೊರಸುತ ||2||
ಕಕ್ಕಸ ಕುಚದೊಳಿರ್ದ ಕಸ್ತೂರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ
ಅಕ್ಕರದ ತಾಂಬೂಲ ಸರಸದಿಂದುಗುಳುತ ಚೊಕ್ಕ ಪುರಂದರ ವಿಠಲನ ನೋಡಿ ನಗುತ ||3||
* ಈ ರಚನೆಯ ಬಗ್ಗೆ ಹೆಚ್ಚಿನ ವಿವರಗಳುಳ್ಳ ಒಂದು ಬರಹಕ್ಕೆ ಇಲ್ಲಿ ಚಿಟಕಿಸಿ: ಶೃಂಗಾರ [...]
Filed under: ಈ, ಶೃಂಗಾರ | Tagged: ಲಕ್ಷ್ಮಿ, ಶೃಂಗಾರ, SrngAra | Leave a Comment »
Posted on June 10, 2008 by neelanjana
ತಂಗಾಳಿ ವಶವಲ್ಲವೇ ||ಪ||
ಅಂಗದೊಳಗೆ ಬೆಳದಿಂಗಳು ತುಂಬಿತು ||ಅ.ಪ||
ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು
ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ ||ಚ1||
ಬಂಗಾರವೊಡಲಿಗೆ ಭಾರವಾಗಿದೆಯೇ ಶೃಂಗರಿಸಕೊಳ ಸೇರಲಿಲ್ಲ
ಅಂಗಜ ಶರತಾಪ ತಾಳಲಾರೆ ನಾನು ಉಂಗುರವು ನಿನಗೆ ಉಚಿತವೇನೇ ಹೆಣ್ಣೇ||ಚ 2||
ಮುನ್ನ ಪುರಂದರ ವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ
ಅನ್ನ ಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೇ ||ಚ 3||
* ಇದೊಂದು ನಾಯಕೀ ಭಾವದ ರಚನೆ. ದಾಸರು ಪುರಂದರ ವಿಠಲನನ್ನು ಕಾಯುತ್ತಿರುವ ಹೆಣ್ಣೊಬ್ಬಳು, ತನ್ನ [...]
Filed under: ಅಂ, ತ | Tagged: ನಾಯಕೀ ಭಾವ, ವಿರಹ, ಶೃಂಗಾರ, SrngAra | Leave a Comment »