ಪಲ್ಲವಿ:
ಮುಯ್ಯಕ್ಕೆ ಮುಯ್ಯಿ ತೀರಿತು ಜಗ-
ದಯ್ಯ ವಿಜಯ ಸಹಾಯ ಪಂಢರೀರಾಯ!
ಚರಣಗಳು:
ಸಣ್ಣವನೆಂದು ನಾ ನೀರು ತಾರೆಂದರೆ ಬೆಣ್ಣೆಗಳ್ಳ ಕೃಷ್ಣ ಮರೆಯ ಮಾಡಿ ಚಿನ್ನದ ಪಾತ್ರೆಯ ನೀರು ತಂದಿತ್ತರೆ ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||
ಎನ್ನ ಪೆಸರಹೇಳಿ ಸೂಳೆಗೆ ಕಂಕಣ ವನ್ನು ನೀನು ಕೊಟ್ಟು ನಿಜವ ಮಾಡೆ ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ ನಿನ್ನ ಮುಯ್ಯಕ್ಕೆ ಮುಯ್ಯ ತೋರಿದೆ ಪಂಢರಿರಾಯ ||
ಭಕ್ತವತ್ಸಲನೆಂಬ ಬಿರುದು ಬೇಕಾದರೆ ಕಿತ್ತು ಈಡಾಡೋ ಇನ್ನೊಂದು ಕಂಕಣವ ಮುಕ್ತಿಗೆ ನೀನಲ್ಲದಾರನು [...]
Filed under: ಮ | Leave a Comment »