ನೀನ್ಯಾಕೋ ನಿನ್ನ ಹಂಗ್ಯಾಕೋ
ಪಲ್ಲವಿ:
ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ
ಚರಣ
1: ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋ
2: ಪ್ರಹ್ಲಾದನ ಪಿತ ಬಾಧಿಸುತಿರುವಾಗ ನರಹರಿಯೆಂಬ ನಾಮವೆ ಕಾಯ್ತೋ
3: ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ
4: ಯಮನ ದೂತರು ಬಂದು ಅಜಾಮಿಳನೆಳೆವಾಗ ನಾರಾಯಣನೆಂಬ ನಾಮವೆ ಕಾಯ್ತೋ
5: ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ನಾಮ ಎಂಬ ನಾಮವೆ ಕಾಯ್ತೋ
6: ಹಸುಳೆ ಆ ಧ್ರುವರಾಯ ಅಡವಿಗೆ ಪೋವಾಗ ವಾಸುದೇವನೆಂಬೊ ನಾಮವೆ ಕಾಯ್ತೋ
7: ನಿನ್ನ ನಾಮಕೆ ಸರಿ ಕಾಣೆನು ಜಗದೊಳು ಘನ್ನ ಮಹಿಮ ಸಿರಿ ಪುರಂದರ ವಿಟ್ಠಲ
ವಿಠ್ಠಲ ಸರಿಯಾದ ಪ್ರಯೋಗ.
ಉತ್ತಮವಾದ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು.