• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ಹೂ ಬೇಕೆ ಪರಿಮಳದಾ?

ಪಲ್ಲವಿ:
ಹೂ ಬೇಕೆ ಪರಿಮಳದಾ?
ಪರಮ ಪುರುಷ ನಮ್ಮ ಕೃಷ್ಣನ ತೋಟದ!
ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯುವ
ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?||
ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿಕೇರಿಯಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ
ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?||
ರಂಗುರಂಗುಗಳಿಂದ ಕಂಗೊಳಿಸುವ ಧ್ವಜ
ಬಂಗಾರದ ಕವಿ ಸಂಗ್ರಹಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||
(ಇದು ವ್ಯಾಸರಾಯರ ರಚನೆಯೆಂದು ತೋರುತ್ತದೆ)

ನೀನ್ಯಾಕೋ ನಿನ್ನ ಹಂಗ್ಯಾಕೋ

ನೀನ್ಯಾಕೋ ನಿನ್ನ ಹಂಗ್ಯಾಕೋ
ಪಲ್ಲವಿ:
ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ
ಚರಣ
1:  ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋ
2:  ಪ್ರಹ್ಲಾದನ ಪಿತ ಬಾಧಿಸುತಿರುವಾಗ ನರಹರಿಯೆಂಬ ನಾಮವೆ ಕಾಯ್ತೋ
3:  ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ
4:  ಯಮನ ದೂತರು ಬಂದು ಅಜಾಮಿಳನೆಳೆವಾಗ ನಾರಾಯಣನೆಂಬ ನಾಮವೆ ಕಾಯ್ತೋ
5:  ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ನಾಮ ಎಂಬ ನಾಮವೆ ಕಾಯ್ತೋ
6:  ಹಸುಳೆ ಆ [...]