• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

ಪೋಗದಿರೆಲೋ ರಂಗ

ಪಲ್ಲವಿ:

ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ

ಅನುಪಲ್ಲವಿ:

ಭಾಗವತರು ಕಂಡರೆ ಎತ್ತಿಕೊಂಡೊಯ್ವರೋ

ಚರಣ:

1. ಸುರ ಮುನಿಗಳು ತಮ್ಮ ಹೃದಯ ಗಹ್ವರದಲ್ಲಿ ಪರಮಾತ್ಮನ ಕಾಣದೆ ಅರಸುವರೊ
ದೊರಕದ ವಸ್ತುವಿಂದು ದೊರಕಿತು ತಮಗೆಂದು ಹರುಷದಿಂದಲಿ ನಿನ್ನ ಕರದೆತ್ತಿಕೊಂಬರು

2: ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ

3: ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರ ವಿಟ್ಠಲರಾಯನೆ ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ

One Response to “ಪೋಗದಿರೆಲೋ ರಂಗ”

  1. ಬ್ಲಾಗಿನೊಡೆಯರಿಗೆ ನಮಸ್ತೇ.
    ನಾನೀಗ ಆಧ್ಯಾತ್ಮಿಕ ಪತ್ರಿಕೆಯೊಂದರ ಉಪಸಂಪಾದಕಿಯಾಗಿ ಪ್ರತಿಕ್ರಿಯಿಸುತ್ತ್ತಿದ್ದೇನೆ. ನಿಮ್ಮ mail ID ಇಲ್ಲದ ಕಾರಣ ಕಮೆಂಟ್ ಬಾಕ್ಸಲ್ಲಿ ತೊಂದರೆ ಕೊಡುತ್ತಿರುವೆ, ಕ್ಷಮಿಸಿ.
    ನಮ್ಮ ಪತ್ರಿಕೆಯಲ್ಲಿ (ಇಸ್ಕಾನ್) ದಾಸರ ಅಪರೂಪದ ರಚನೆಗಳಿಗೆ ಸ್ವರ ಪ್ರಸ್ತಾರ ಹಾಕಿ ಪ್ರಕಟಿಸಬೇಕೆಂಬ ಯೋಜನೆಯಿದೆ. ಸಧ್ಯಕ್ಕೆ, ತೀರಾ ಪರಿಚಿತ ಗೀತೆಗಳಿಗಷ್ಟೆ ಕೆಲವರು ಹಾಕಿಕೊಡುತ್ತಿದ್ದಾರೆ. ತಾವು ಈ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದರೆ, ದಯವಿಟ್ಟು chetana@iskconbangalore.org ಗೆ mail ಮಾಡಿ.
    ಮುಂದೆ ಮಾತಾಡುವಾ.
    ತಮ್ಮ ನಿರೀಕ್ಷೆಯಲ್ಲಿರುತ್ತೇನೆ.
    ವಂದೇ,
    ಚೇತನಾ

Leave a Reply