ಪಲ್ಲವಿ:
ಪೊಂಗೊಳಲೂದುತಿಹ ಯದುಕುಲೋತ್ತುಂಗ
ಅನುಪಲ್ಲವಿ:
ತಿಂಗಳಪಾಂಗನೆ ರಜತ ಶುಭಾಂಗ
ಚರಣ:
1:
ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ
ಬಲಿಯ ಬೇಡಿದನು ಭೃಗು ಕುಲದಿ ಜನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ
ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ
2:
ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ
ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ
ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ
ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ
3:
ವಾರಿಚರ ಕೂರ್ಮಾವತಾರ ಸೂಕರ ಕ್ರೂರ
ಧರಣಿಯನೆಳೆದು ಶೂರರನು ಗೆಲಿದು
ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು
ಏರಿದನು ಹಯವ ಪುರಂದರ ವಿಠಲ ಜಗದೊಡೆಯ
Filed under: Uncategorized | Tagged: ದಶಾವತಾರ, ಪ, dashavatara
ಹೌದು. ಸಾಹಿತ್ಯದಲ್ಲಿ ಏನೋ ತೊಡಕಿದೆ. ನನ್ನಲ್ಲಿರುವ ಪುಸ್ತಕದಲ್ಲಿ ಹುಡುಕಿದೆ. ಈ ಹಾಡು ಇಲ್ಲ. ನಿಮಗೆಲ್ಲಿ ಸಿಕ್ಕಿತು? ವಿದ್ಯಾಭೂಷಣರು ಈ ಹಾಡನ್ನು ಹಾಡಿದ್ದನ್ನು ಕೇಳಿದ್ದೇನೆ. ಎಲ್ಲಾದರೂ ಸಿಕ್ಕರೆ ಕೇಳಬೇಕು.
ಇದೀಗ ತಿದ್ದುಪಡಿ ಹಾಕಿದ್ದೇನೆ